01/06/2026
ಭಗವಂತ ನೀನೊಮ್ಮೆ ಹೇಳಿಬಿಡು ನೀನು ಕ್ರೂರಿಯೋ ದಯಾಳುವೋ ಕರುಣಾಮಯಿ ನೋ ಅಂತ ಯಾಕೆಂದರೆ ನಿಷ್ಕಲ್ಮಶ ಜೀವವೊಂದು ಭಿಕ್ಷೆ ಬೇಡಿ ಅಮ್ಮ ಬರುವವರೆಗೂ ಆಆಹಾರ ಮುಟ್ಟಿಲ್ಲ ಉಳ್ಳವರ ಪಾತ್ರೆಯಲ್ಲಿ ಸಾಕಾದರೆ ಅದು ಡಸ್ಟ್ ಬಿನ್ ಗೆ ಹೋಗುತ್ತೆ (ಅಲ್ವಾ ಶಿವ )ಹೀಗೆ ಮನೆ ದೇವರಿಗೆ ಶಿವಮೊಗ್ಗದಿಂದ ಬಸ್ ಹಿಡಿದು ಹರಿಹರ ರೈಲ್ವೆ ಸ್ಟೇಷನ್ ತಲುಪಿದೆ ನಾನು ಹೋರಾಟದ್ದನ್ನು ಕಂಡ ನನ್ನ ಪತ್ನಿ (ganga)ಯಾರದ್ದೋ ಹತ್ತಿರ ರೊಟ್ಟಿ ಚಟ್ನಿ ಪುಡಿ ಮತ್ತು ಜವಳಿ ಕಾಯಿ ಪಲ್ಯ ಯಲ್ಲಾ ಕಟ್ಟಿ ಸುರಕ್ಷಿತವಾಗಿ ಹೋಗಿ ಬನ್ನಿ ಅಂತ ಹರಸಿ ಕಳಿಸಿದ ರೊಟ್ಟಿ ತಿಂತ ಹರಿಹರ ರೇಲ್ವೆ ಸ್ಟೇಷನ್ನಲ್ಲಿ ಪುಟ್ಟ ಬಾಲಕಿ ತಟ್ಟೆ ಹಿಡಿದು ಆಹಾರಕ್ಕಾಗಿ ಕಾದು ನಿಂತಿದ್ದಳು ನನ್ನ ಪಕ್ಕದಲ್ಲೇ ದೊಡ್ಡದೊಂದು ಕುಟುಂಬ ಅವರು ಸಹ ಊಟ ಮಾಡುತ್ತಿದ್ದರು ಆದರೆ ಈ ಪುಟ್ಟ ಬಾಲಕಿಯನ್ನು ನೋಡಲೇ ಇಲ್ಲ ಆದರೆ ಇದರಲ್ಲಿ ಅವರ ತಪ್ಪಿಲ್ಲ ಆ ಬಾಲಕಿ ಆಹಾರ ಅವರ ಬಳಿ ಕೇಳಲೇ ಇಲ್ಲ ಪಕ್ಕದಲ್ಲೇ ನಾನು ಊಟ ಮಾಡುತ್ತಾ ಗಮನಿಸುತ್ತಿದ್ದ ನಾನು ಕರೆದು ನನ್ನ ಬಳಿ ಇದ್ದ ರೊಟ್ಟಿ ಪಲ್ಯ ಕೊಟ್ಟೆ ಮಗು ಸಂತೋಷ ದಿಂದ ಹೋಯ್ತು ಆದರೆ ಆ ಊಟ ಹಿಡಿದು ಅಮ್ಮನಿಗೋಸ್ಕರ ಸಣ್ಣ ಮಕ್ಕಳನ್ನು ಕಾಯುತ್ತ ಅಮ್ಮನ ಬರುವಿಕೆಗಾಗಿ ಕಾಯುತ್ತಿದ್ದ ಆ ಬಾಲಕಿ ಯನ್ನು ನೋಡಿ ಕಣ್ಣೀರು ಬಂತು ಅದಕ್ಕೆ ಕೇಳಿದೆ ಭಗವಂತ ನೀನು ಕರುಣಾಮಯಿ ನೋ ಕ್ರೂರಿಯೋ ದಯಮಾಡಿ ಅಮಾಯಕರನ್ನು ಶಿಕ್ಷಸಬೇಡ ತಂದೆ ಅವರಿಗೆ ಹೊಟ್ಟೆ ತುಂಬಾ ಊಟ ಮಲಗಲಿಕ್ಕೆ ಸೊರು ನೆಮ್ಮದಿಯಾಗಿ ನಿದ್ರೆ ಅರೋಗ್ಯ ಕೊಟ್ಟು ಕಾಪಾಡು